ಬಂಟ್ವಾಳ: ತಾಲೂಕಿನ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಬಂಟ್ವಾಳ ಬಿಜೆಪಿ ಬಂಟ್ವಾಳ ಮಂಡಲ ಆಶ್ರಯದಲ್ಲಿ ರಾಯಿ ಗ್ರಾಮ ಪಂಚಾಯತ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಗೆ ವಿರೋಧವಾಗಿ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಗೆ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವ ವಹಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ರಾಯಿಬೆಟ್ಟು, ಉಪಾಧ್ಯಕ್ಷರಾದ ಗುಣವತಿ ಪೂಜಾರಿ,ಬಂಟ್ವಾಳ ಬಿಜೆಪಿ ಮಂಡಲದ ಮಾಜಿ ಕಾರ್ಯದರ್ಶಿ ರಮನಾಥ ರಾಯಿ ಹಾಗೂ ಧಮೋಧ್ಧಾನ ಪ್ರತಿಷ್ಠಾನ ವೇದಿಕೆ ರಾಯಿ, ಕೊಯಿಲ, ಅರಳ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ದ.ಕ ಬಿಜೆಪಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸಹಸಂಚಾಲಕ ಹರೀಶ್ ರಾಯಿ, ಬಂಟ್ವಾಳ ಬಿಜೆಪಿ ಮಂಡಲದ ಪ್ರಕೋಷ್ಠಗಳ ಸಂಚಾಲಕಾರದ ಚಂದ್ರಶೇಖರ ಗೌಡ ಕಾರಂಬಡೆ, ಸಂತೋಷ್ ಅಂಚನ್, ಆನಂದ ಬುರಾಲ್, ಜಯಂತ್ ಸಪಲ್ಯ, ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿ ಬಂಟ್ವಾಳ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಪೂಜಾರಿ ಬದನಾಡಿ, ಶಕ್ತಿಕೇಂದ್ರ ಸಂಚಾಲಕರು,ಬೂತ್ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿಗಳು ಪಕ್ಷದ ಹಿರಿಯ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದರು. ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ ಧನ್ಯವಾದವಿತ್ತರು.





