Breaking
25 Sep 2026, Fri

ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರಿಯ ಯೋಗ ದಿನಾಚರಣೆ

ಉಜಿರೆ : ಅನುಗ್ರಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾಸಭಾಭವನದಲ್ಲಿ ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು “ಒಂದು ಭೂಮಿ ಒಂದು ಆರೋಗ್ಯ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಫಾ!ವಿಜಯ್ ಲೋಬೋ ಅವರು ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯರಾದ ಡಾ.ಅಬಿಟೋನ್ ಹಾಗು ಶಾರೀರಿಕ ಶಿಕ್ಷಕರಾದ ವಸಂತ ಹೆಗ್ಢೆ ಹಾಗು ನಿಶ್ಚಿತ್ ಅವರ ಜೊತೆಗೂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಕಾಲೇಜಿನ ವೈದ್ಯರಾದ ಡಾ.ಅಬಿಟೋನ್, ತಮ್ಮ ಸಂದೇಶದಲ್ಲಿ ಯೋಗವನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಯಾವ ರೀತಿ ಜೀವನ ಶೈಲಿಯನ್ನು ಸುಧಾರಿಸಬಹುದು ಎಂದು ಹೇಳಿದರು.

ಪ್ರಾಂಶುಪಾಲರು ತಮ್ಮ ಮಾತಿನಲ್ಲಿ ಇಂದು ಯೋಗದ ಕುರಿತು ಕೇವಲ ಭಾರತ ಮಾತ್ರವಲ್ಲ ಜಗತ್ತೇ ಮಾತನಾಡುತ್ತಿದೆ. ಆಧುನಿಕತೆಯ ಭರಾಟೆಯ ನಡುವೆ ಯೋಗದ ಮಹತ್ವವನ್ನು ವಿದೇಶಿಯರು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ಮೂರು ದಿನದ ಯೋಗತರಬೇತಿಯನ್ನು ಧರ್ಮಸ್ಥಳ ನ್ಯಾಚುರೋಪತಿ ಕಾಲೇಜಿನ ವೈದ್ಯವಿದ್ಯಾರ್ಥಿಗಳಾದ ಸುಪ್ರಿತಾ ಭಟ್, ಪ್ರಕೃತಿ, ಸಾರಂಗಿರವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿತೆ ನಡೆಯಿತು.

ಹಿರಿಯ ಶಿಕ್ಷಕಿ ವಿನಯಲತಾ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *