ಉಡುಪಿ: ಪಾಪಿ ಮಗನೊಬ್ಬ ತನ್ನ ವೃದ್ಧ ತಾಯಿಯನ್ನೇ ಕೊಂದ ಹೇಯ ಕೃತ್ಯ ಅಜ್ಜರಕಾಡುವಿನಲ್ಲಿ ನಡೆದಿದೆ.
ಕೊಲೆಯಾದ ವೃದ್ದೆ ಪದ್ಮಾಬಾಯಿ, ಕೊಲೆಗಾರ ಮಗ ಈಶ ನಾಯಕ್ ಎಂದು ಗುರುತಿಸಲಾಗಿದೆ. ವೃದ್ಧೆಯ ಅನುಮಾನಾಸ್ಪದ ಸಾವು ಈಗ ಕೊಲೆ ಎಂದು ದೃಢಪಟ್ಟಿದೆ.
ತಾಯಿ ಪದ್ಮಾಬಾಯಿ ಅವರಿಗೆ ಸೊಂಟನೋವುಯಿದೆ ತಾಯಿಗೆ ಚಿಕಿತ್ಸೆ ಕೋಡಿಸಲು ಹಣ ಕಳುಹಿಸಲು ತಂಗಿ ಶಿಲ್ಪಾ ಬಳಿ ಕೇಳಿ ಕೊಂಡಿದ ಆರೋಪಿ ಆಕೆ ಆನ್ ಲೈನ್ ಮೂಲಕ ಕಳುಹಿಸಿಕೊಟ್ಟಿದಳು.

ಅವರನ್ನು ಅಜ್ಜರಕಾಡುವಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹೆಚ್ಚಿನ ಚಿಕಿತ್ಸೆಗಾಗಿ ಮನಿಪಾಲ ಕ್ಕೆ ಸೇರಿಸಿದ್ದರು ಆದರೆ ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಶಿಲ್ಪಾ ಬಂದು ನೋಡಿದಾಗ ಕುತ್ತಿಗೆಯ ಮೇಲಿನ ಕೆಂಪು ಗುರುತುಗಳು ಕೊಲೆಯ ಅನುಮಾನವನ್ನು ಹುಟ್ಟುಹಾಕಿದವು.
ಜೂನ್ 21 ರಂದು, ವಿಧಿವಿಜ್ಞಾನ ತಜ್ಞರು ಪದ್ಮಾಬಾಯಿಯವರ ಸಾವು ಹತ್ಯೆಯ ಸ್ವರೂಪದ್ದಾಗಿದೆ ಎಂದು ದೃಢಪಡಿಸುವ ಪ್ರಾಥಮಿಕ ವರದಿಯನ್ನು ನೀಡಿದರು. ಜೂನ್ 18 ರಂದು ರಾತ್ರಿ 9:22 ರಿಂದ ಜೂನ್ 19 ರಂದು ಬೆಳಿಗ್ಗೆ 9:45 ರ ನಡುವಿನ ಕೊಲೆಯಾಗಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ ಎನ್ನಲಾಗಿದೆ. ತನಿಖೆಯ ಸಮಯದಲ್ಲಿ, ಆರ್ಥಿಕ ಸಮಸ್ಯೆಗಳು ಮತ್ತು ನಡೆಯುತ್ತಿರುವ ಕೌಟುಂಬಿಕ ಕಲಹಗಳಿಂದಾಗಿ ಈಶಾ ನಾಯಕ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ವಶಕ್ಕೆ ಪಡೆದು ವರದಿಯ ಆಧಾರದ ಮೇಲೆ, ಮಣಿಪಾಲ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
