ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಂಟ್ವಾಳ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ತಾಲೂಕು, ಉಪ ಅರಣ್ಯ ಇಲಾಖೆ ಬಂಟ್ವಾಳ ತಾಲೂಕು, ಶೌರ್ಯ ವಿಪತ್ತು ನಿರ್ವಹಣ ಘಟಕ ಬಂಟ್ವಾಳ ತಾಲೂಕು ಸಹಯೋಗದೊಂದಿಗೆ, ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾರ್ಶಿವಾದದೊಂದಿಗೆ ʼಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿʼ ಗಿಡ ನಾಟಿ ಕಾರ್ಯಕ್ರಮ ಸಿದ್ದಕಟ್ಟೆ ಬಬ್ಬರ ಬೈಲು ಕೊಯಿಲದಲ್ಲಿ ಇಂದು (ಜು.14) ನಡೆಯಿತು.

ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೋನಾಲ್ಡ್ ಡಿ ಸೋಜಾರವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಭಾಗವಹಿಸಿದ ಮಾತನಾಡಿದ ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ಕೃಷ್ಣ ನಾಯ್ಕ್ ಅವರು, ಅರಣ್ಯದಿಂದ ನಮಗೆ ಹಲವಾರು ಉಪಯೋಗಗಳಿದ್ದರು ನಾವು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಾ ಬಂದಿದ್ದೇವೆ. ಪ್ರಪಂಚದಲ್ಲಿ ಜನ ಸಂಕುಲ ಉತ್ತಮ ರೀತಿಯಲ್ಲಿ ಬದುಕಬೇಕಾದರೆ 33% ಮರಗಿಡಗಳು ಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆಗಳು ಆಗುತ್ತದೆ. ಆದರೆ ಮಳೆ ಬೀಳುವ ದಿನಗಳು ಕಡಿಮೆ ಆಗುತ್ತಿದೆ ಇದು ಹೆಚ್ಚಾಗಬೇಕು ಇದಕ್ಕೆ ಅರಣ್ಯದ ಅವಶ್ಯಕತೆ ಎಂದು ಜಾಗೃತಿ ಮೂಡಿಸಿದರು.

ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ರವರು ಮಾತನಾಡುತ್ತಾ ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ 7 ಕೋಟಿ ಕಾಡುಹಣ್ಣಿನ ಗಿಡಗಳನ್ನು ನೆಟ್ಟು ರಕ್ಷಣೆ ಮಾಡುತ್ತಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಮೊದಲು ಸಾಂಕೇತಿಕವಾಗಿ ಸಸಿ ವಿತರಣೆ ಮಾಡಿ, ಬಳಿಕ ಅತಿಥಿ ಗಣ್ಯರು ಬಬ್ಬರ ಬೈಲು ದೇವಸ್ಥಾನದಲ್ಲಿ ಗಿಡ ನಾಟಿ ಮಾಡಿದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಜಗದೀಶ್ ಕೊಯಿಲ, ಬಬ್ಬರ ಬೈಲು ಸೇವಾ ಸಮಿತಿ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ, ವಲಯಾಧ್ಯಕ್ಷರಾದ ರಾಧಾಕೃಷ್ಣ ಆಚಾರ್ಯ, ಹರ್ಷೇಂದ್ರ ಹೆಗ್ಡೆ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್ , ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ಪ್ರವೀಣ್ ಪೂಜಾರಿ, ಸದಾನಂದ ನಾವೂರ, ಶಶಿಧರ ಆಚಾರ್ಯ, ಶಾಲಿನಿ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ಉಪಸ್ಥಿತರಿದ್ದರು.
ಕ್ಷೇತ್ರದ ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಭಾಸ್ಕರ್ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ನಿರ್ವಹಿಸಿದರು.

ಬಂಟ್ವಾಳ ತಾಲೂಕು ಶೌರ್ಯ ಸ್ವಯಂ ಸೇವಕರಿಂದ 250 ಗಿಡಗಳನ್ನು ನಾಟಿಮಾಡಲಾಯಿತು.



