Breaking
25 Mar 2026, Wed

ಬೆಳ್ತಂಗಡಿ: ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ತಾಲೂಕಿನ ಪ್ರಥಮ ದರ್ಜೆ ಸಹಾಯಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಹಾಸನ ಜಿಲ್ಲೆಯ ನಿವಾಸಿ ಸತೀಶ್(46) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜು.15 ರ ಬೆಳಗ್ಗೆ ಸ್ನಾನ ಮಾಡಿ ವಾಪಸ್ ಬರುವಾಗ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತಾದರೂ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಮೃತರು ಪತ್ನಿ ಜಯಶ್ರೀ ಮತ್ತು ಓರ್ವ ಮಗ ಚಂದನ್ ನನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *