ಬಂಟ್ವಾಳ : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಪೊಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ʼಕೃಷ್ಣ ಕೃಷ್ಣ ಶ್ರೀ ಕೃಷ್ಣಾʼ ಎಂಬ ಶಿರೋನಾಮೆಯಡಿ ಕಳೆದೆರಡು ವರ್ಷಗಳಿಂದ ನೀಡುತ್ತಾ ಬಂದಿದೆ. ಈ ಬಾರಿ ಆಗಸ್ಟ್ 24ರಂದು ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಹೇಳಿದರು.

ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ನಡೆದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ – ಸೀಸನ್ 3ರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸೇವಾದಳಪತಿ ಜಯಂತ್ ಕುಲಾಲ್ ಅಗ್ರಬೈಲು ಮಾತನಾಡಿ ಕೃಷ್ಣ ವೇಷ ಸ್ಪರ್ಧೆಯ ಜೊತೆ ತಾಲೂಕಿನ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಟ್ಟರ್, ವೆಲ್ಡರ್, ಮೆಶಿನಿಷ್ಟ್, ಅಟೋಮೊಬೈಲ್ ವರ್ಕರ್, ಡಿಸೇಲ್ ಮೆಕ್ಯಾನಿಕ್, ಎಸಿ ಟೆಕ್ನಿಶಿಯನ್, ಮೆಶಿನ್ ಆಪರೇಟರ್‍ಸ್, ಮೊಬೈಲ್ ಟೆಕ್ನಿಶಿಯನ್, ಅಟೋ ಎಲೆಕ್ಟ್ರೀಶಿಯನ್, ದ್ವಿಚಕ್ರ, ತ್ರಿಚಕ್ರ, ಘನವಾಹನಗಳ ಎಲ್ಲಾ ವಿಭಾಗದ ಟೆಕ್ನಿಶಿಯನ್‌ರವರನ್ನು ಗುರುತಿಸಿ ‘ನಮ್ಮೂರ ಟೆಕ್ನೀಶಿಯನ್’ ಎಂಬ ಶೀರ್ಷಿಕೆಯಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್, ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಜತೆಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ, ಸತೀಶ್ ಸಂಪಾಜೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಸ್ವಾಗತಿಸಿದರು.



