ಮಂಗಳೂರು : ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆ ಬೊಳಿಯ ಇಲ್ಲಿ ದ್ವಿಭಾಷಾ ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನೆ ನಡೆಯಿತು.

ದ್ವಿಭಾಷೆ ಆಂಗ್ಲ ಮಾಧ್ಯಮ ತರಗತಿಯನ್ನು ಮುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮೂರಿನ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭವಾದದ್ದು ತುಂಬಾ ಸಂತೋಷ ತಂದಿದೆ. ಈ ಭಾಗದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಗೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕು ಎಂದರು .

ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಮಾತನಾಡಿ ಈ ಭಾಗದ ಪಂಚಾಯತ್ ನ ಜನಪ್ರತಿನಿಧಿಗಳು , ಶಿಕ್ಷಕರು , ಎಸ್ ಡಿ ಎಂ ಸಿ ನ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳ ಮುತುವರ್ಜಿಯಿಂದ ಇಂದು ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿದೆ. ಈ ಶಾಲೆಗೆ ಬೇಕಾಗುವ ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ. ಈ ಬಾರಿ ಆಂಗ್ಲ ಮಾಧ್ಯಮ ತರಗತಿಗೆ 2 ಎರಡು ಮಕ್ಕಳಿದ್ದು. ಬರುವ ವರ್ಷ ಈ ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸುವ ಭರವಸೆ ಮಕ್ಕಳ ಪೋಷಕರ ಮೇಲೆ ಹಾಗೂ ಶಾಲಾ ಶಿಕ್ಷಕರ ಮೇಲೆ ಇದೆ ಎಂದರು. ಮುತ್ತೂರು ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆಗಿರುವ ಸತೀಶ್ ಪೂಜಾರಿ ಬಳ್ಳಾಜೆ , ನಮ್ಮ ಈ ಶಾಲೆಯು ಬೇರೆ ಆಂಗ್ಲ ಮಾಧ್ಯಮ ಶಾಲೆಗಿಂತ ಭಿನ್ನವಾಗಿದ್ದು ಇದರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ಮೂಲಕ ಒಂದು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಷ್ಮಾ , ಪಂಚಾಯತ್ ಸದಸ್ಯರುಗಳಾದ ಪುಷ್ಪ ನಾಯ್ಕ್ , ಶಶಿಕಲಾ, ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಸವಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂದೀಪ್ ಆಳ್ವ, ಊರಿನ ಶಾಲಾಭಿಮಾನಿಗಳಾದ ಭವಾನಂದಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಮಹಾಬಲ ಸಾಲಿಯನ್ , ಹೊನ್ನಯ್ಯ ಪೂಜಾರಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ ಅಧ್ಯಕ್ಷರಾದ ಗಂಗಾಧರ್, ಎಸ್ ಡಿ ಯಂ ಸಿ ಪದಾಧಿಕಾರಿಗಳು , ಶಾಲಾ ಮುಖ್ಯೋಪಾಧ್ಯಾಯನಿಯಾದ ಜಯಲಕ್ಷ್ಮಿ ಉಪಸ್ಥಿತರಿದ್ದರು .ಶಿಕ್ಷಕ ನಾಗೇಶ್ ನಾಯಕ್ ವಂದಿಸಿ, ಪ್ರೌಢಶಾಲಾ ಸಹ ಶಿಕ್ಷಕರಾದ ಶಂಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು .




