ಹೊಕ್ಕಾಡಿಗೋಳಿ: ದಿನಾಂಕ 21.6.2025ರಂದು ಸ. ಉ. ಪ್ರಾ. ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆಯಲ್ಲಿ ದಾನಿಗಳಿಂದ ಮಕ್ಕಳಿಗೆ ವಿವಿಧ ಕೊಡುಗೆಗಳನ್ನು ವಿತರಿಸಲಾಯಿತು.
- EDRT ಸಂಸ್ಥೆಯಿಂದ ಶ್ರೀಮತಿ ಮೀನಾಕ್ಷಿ ಮಾತಾಜಿ ಮತ್ತು ಶ್ರೀ ಹರೀಶ್ ಆಚಾರ್ಯ ಇವರ ನೇತೃತ್ವದಲ್ಲಿ ಮಕ್ಕಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕ ಮತ್ತು ಕ್ರೀಡಾ ಸಾಮಗ್ರಿ
- ಶ್ರೀ ಎಸ್. ಮಹಮ್ಮದ್, ಟೋಟಲ್ ಕ್ಲೀನ್ ಲಾಂಡ್ರಿ ಮಾಲೀಕರು, ಇವರಿಂದ ಟ್ರ್ಯಾಕ್ ಸೂಟ್
- ಶ್ರೀ ಮನೋಜ್ ಐತೇರಿ, ಇವರಿಂದ ಉಚಿತ ನೋಟ್ ಪುಸ್ತಕ
- ಶ್ರೀ ನರೇಶ್ ಪೂಜಾರಿ, ಪ್ರಧಾನ ಅರ್ಚಕರು, ಶ್ರೀ ಕೊರಗಜ್ಜ ಕ್ಷೇತ್ರ, ದೇಲೋಡಿ, ಆರಂಬೋಡಿ ಇವರಿಂದ ಉಚಿತ ನೋಟ್ ಪುಸ್ತಕ
- ಶ್ರೀಮತಿ ವಿಜಯ ಕುಂಜಾಡಿ, ಗ್ರಾಮ ಪಂಚಾಯತ್ ಸದಸ್ಯರು, ಆರಂಬೋಡಿ ಇವರಿಂದ ಹೊಸದಾಗಿ ದಾಖಲಾದ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಉಚಿತ ನೋಟ್ ಪುಸ್ತಕ
- ಶ್ರೀಮತಿ ಜೂಲಿಯಾನ ಡಿಸೋಜ ಇವರ ಮಗ ಅಲ್ವಿನ್ ಡಿಸೋಜಾ ಇವರಿಂದ ಉಚಿತ ಛತ್ರಿ
- ಶ್ರೀ ಕಿರಣ್ ಮಂಜಿಲ, ಉದ್ಯಮಿ ಇವರಿಂದ ಗೌರವ ಶಿಕ್ಷಕರ ವೇತನ
- ಶ್ರೀ ರಾಘವೇಂದ್ರ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಎರಡು ಫ್ಯಾನ್ ಕೊಡುಗೆಯಾಗಿ ನೀಡಿದರು.
ಈ ಸಂಧರ್ಭದಲ್ಲಿ ಕೊಡುಗೆ ನೀಡಿದ ಎಲ್ಲಾ ದಾನಿಗಳನ್ನು ಅಭಿನಂದಿಸಲಾಯಿತು.
ಈ ಸಭೆಯಲ್ಲಿ ಶ್ರೀ ಸಂತೋಷ್ ಮಂಜಲ, ಶ್ರೀ ನಿತೇಶ್, ಶಾಲಾ ಎಸ್. ಡಿ. ಎಂ. ಸಿ. ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶ್ರೀಮತಿ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರ ಸ್ವಾಗತಿಸಿ ಶ್ರೀಮತಿ ಶುಭವತಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಮೆಟಿಲ್ಡಾ ಮತ್ತು ಶ್ರೀಮತಿ ಸಿಲ್ವಿಯ ಮಿರಾಂದ, ಕುಮಾರಿ ಸುತೀಕ್ಷ ದಾನಿಗಳ ಬಗ್ಗೆ ತಿಳಿಸಿದರು.

