ಪುತ್ತೂರು : ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದ ಅಣ್ಣಪ್ಪ ಪುತ್ತೂರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬನ್ನೂರಿನ ಮೇಲ್ಮಜಲು ನಿವಾಸಿ ಅಣ್ಣಪ್ಪ ಪುತ್ತೂರು (26 ವ) ಎಂದು ಗುರುತಿಸಲಾಗಿದೆ. ಪುತ್ತೂರಿನ ಸೇವಾ ಸಂಸ್ಥೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮೂಲಕ ವಿಶೇಷ ವೇಷ ಧರಿಸಿ ಹಲವು ಬಡ ಕುಟುಂಬದ ಮಕ್ಕಳಿಗೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ನೆರವಾಗುತ್ತಿದ್ದರು. ಬಳಿಕ ಪುತ್ತೂರಿನಲ್ಲಿ ತನ್ನದೇ ಆದ ಕಲಾಸಿರಿ ಗೊಂಬೆ ಬಳಗವನ್ನು ಆರಂಭಿಸಿದರು.

ಜಾತ್ರೆ, ಇನ್ನಿತರ ಕಾರ್ಯಕ್ರಮಗಳಲ್ಲಿ ವೇಷ ಧರಿಸಿ ಬಂದ ಹಣವನ್ನು ಸ್ವಾರ್ಥಕ್ಕಾಗಿ ಬಳಸದೆ ಪರ ಹಿತಕ್ಕಾಗಿ ಬಡ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ನೀಡುತ್ತಿದ್ದರು. ವರ್ಷದಲ್ಲಿ ಒಂದು ದಿನ ವೇಷ ಧರಿಸಿ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿದ್ದರು.

ಇದೀಗ ಅಣ್ಣಪ್ಪ ಪುತ್ತೂರುರವರು ಇಹಲೋಕ ತ್ಯಜಿಸಿ ಸಹೋದರಿಯನ್ನು ಅಗಲಿದ್ದಾರೆ.

