ಬಂಟ್ವಾಳ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಜನ ಸಾಮಾನ್ಯರಿಗೆ ನೀಡುತ್ತಿರುವ ಸರಕಾರಿ ಸೇವೆಗಳನ್ನು ಕಠಿಣಗೊಳಿಸಿ ಜನವಿರೋಧಿ ನೀತಿ ಅನುಸರಿಸುತ್ತಿರುವುದನ್ನು ತಕ್ಷಣದಿಂದ ಕೈ ಬಿಡಬೇಕು ಎಂದು ಬಂಟ್ವಾಳ ವಿಧಾನ ಸಭಾ ಕ್ಶೇತ್ರ ವ್ಯಾಪ್ತಿಯ 39 ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭಾ ಕಚೇರಿ ಎದುರುಗಡೆ ದಿನಾಂಕ 23-06-2025 ರಂದು ಬೆಳಿಗ್ಗೆ ಗಂಟೆ 1೦:೦೦ ಕ್ಕೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಮನವಿ ಮಾಡಲಾಗುವುದು ಎಂದು ಬಂಟ್ವಾಳ ವಿಧಾನ ಸಭಾ ಕ್ಶೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಶೇತ್ರದ ಬಿಜೆಪಿ ಅದ್ಯಕ್ಷರಾದ ಆರ್ ಚೆನ್ನಪ್ಪ ಕೊಟ್ಯಾನ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರತೀ ಗ್ರಾಮ ಪಂಚಾಯತಿಗೆ ಮತ್ತು ಪುರಸಭೆಗೆ ಒಟ್ಟು 40 ಮಂದಿ ಪ್ರಮುಖರನ್ನಾಗಿ ನೇಮಿಸಲಾಗಿದೆ.
ಜನವಿರೋಧಿ ನೀತಿಗಳ ವಿವರ ಈ ರೀತಿ ಇದೆ:
1. 94 ಸಿ ಹಕ್ಕು ಪತ್ರಗಳಿಗೆ 9/11 ನೀಡುವುದನ್ನು ತಡೆ ಮಾಡಿರುವುದನ್ನು ತಕ್ಷಣದಿಂದಲೇ ಕೈ ಬಿಟ್ಟೂ ಹಿಂದಿನ ಮಾದರಿಯಲ್ಲಿಯೇ 9/11 ನೀಡಬೇಕು.
2. ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಿರುವುದು.
3. ಪ್ಲೋಟಿಂಗ್ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿರುವುದು.
4. ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿದಿರುವುದು (ಇದರಿಂದ ಕೋಳಿ ಫಾರಂ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದೆ).
5. ಗ್ರಾಮ ಪಂಚಾಯತ್ ಗಳಲ್ಲಿ 9/11 ಪಡೆಯಬೇಕಾದರೆ ಲೇಔಟ್ ನಕ್ಷೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿ (ಮೂಡ)ದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯುವ ಬಗ್ಗೆ ಆದೇಶ ಹೊರಡಿಸಿರುವುದು (ಗ್ರಾಮ ಪಂಚಾಯತ್ ಗಳನ್ನು ನಗರಾಡಳಿತ ಇಲಾಖೆಗೆ ಮರ್ಜಿ ಮಾಡಿದ ಸರಕಾರ)
.6. ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕಕ್ಕೆ ಕಾರ್ಮಿಕ ಇಲಾಖೆಯ ಪ್ರಮಾಣ ಪತ್ರ ಪಡೆಯಲು ಆದೇಶ ಹೊರಡಿಸಿ ಜನವಿರೋಧಿ ನೀತಿ ಅನುಸರಿಸುತ್ತಿರುವುದು.
7. ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿಯಿಂದ (ಮೂಡ) ಪ್ರಾರಂಭಿಕ ಪ್ರಮಾಣ ಪತ್ರ ಪಡೆಯಲು ಆದೇಶ ಮಾಡಿರುವುದು (ಇದರಿಂದ ಗ್ರಾಮ ಪಂಚಾಯತ್ ಆಡಳಿತಕ್ಕೆ ಯಾವುದೇ ಗೌರವ ಇಲ್ಲದಂತಾಗಿದೆ)
8. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಲ್ಲಿನ 1-5 ಪ್ಲೋಟಿಂಗ್ ಆಗದಿರುವ ನೂರಾರು ಪ್ರಕರಣಗಳು ಇತ್ಯರ್ಥವಾಗದಿರುವುದು.
9. ಗ್ರಾಮೀಣ ಭಾಗದ ಬಡ ಜನರಿಗೆ ವಾಸ್ತವ್ಯಕ್ಕೆ ಸೂರು ಒದಗಿಸುವ ವಸತಿ ಯೋಜನೆಗಳು ಸಂಪೂರ್ಣ ಸ್ಥಗಿತ ಮಾಡಿದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರ.
10. ಗ್ರಾಮೀಣ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವ ಮರಳು ಮತ್ತು ಕೆಂಪುಕಲ್ಲು ಸಾಗಾಣಿಕೆಗೆ ಶಿಸ್ತು ಕ್ರಮದ ಆದೇಶದಿಂದ ಮನೆ ಕಟ್ಟಲಿರುವ ಅದೆಷ್ಟೋ ಮಂದಿ ಬಡವರು ಕಂಗಾಲಾಗಿದ್ದು, ಕಾರ್ಮಿಕರು ದಿಕ್ಕಾ ಪಾಲು ಆಗಿರುತ್ತಾರೆ.
11. ವೃದ್ದಾಪ್ಯ ವೇತನ ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ ಸೇರಿದಂತೆ ಎಲ್ಲಾ ಪಿಂಚಣಿ ಸೌಲಭ್ಯಗಳನ್ನು ಹಂತ ಹಂತವಾಗಿ ಕಡಿತಗೊಳಿಸಿರುವುದು.
12. ಕಾರ್ಮಿಕರ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ವಿದಧ ವಿದ್ಯಾರ್ಥಿ ವೇತನಗಳ ಮೊತ್ತ ಕಡಿತಗೊಳಿಸಿರುವುದು.
13. 94 ಸಿ ಅಡಿಯಲ್ಲಿ ಹಕ್ಕುಪತ್ರ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವುದು.
14. ಜಮೀನಿ ಪರಾಬಾರೆ, ಎಗ್ರಿಮೆಂಟ್ ಕರಾರು ಪತ್ರ ಇತ್ಯಾದಿ ಬಗ್ಗೆ ಸ್ಟಾಂಪ್ ಪೇಪರ್ ನೋಂದಣಿ ಶುಲ್ಕವನ್ನು ೧೦ ಪಟ್ಟು ಹೆಚ್ಚಿಸಿರುವುದು.
15. ವಿದ್ಯುತ್ ಬಿಲ್ಲ್ ಮೊತ್ತವನ್ನು ದುಪ್ಪಟ್ಟು ಮಾಡಿರುವುದು.
16. ಅರ್ಹ ಬಡಕುಟುಂಬಗಳಿಗೆ BPL ಪಡಿತರ ಚೀಟಿ ನೀಡದಿರುವುದು.
17. ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಿರುವುದು.
18. ರೈತರಿಗೆ ಬಾಕಿ ಇರುವ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿಲ್ಲ.
19. ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾ. ಪಂ. ನೌಕರರನ್ನು ಖಾಯಂ ಮಾಡದಿರುವುದು..


