ಬಂಟ್ವಾಳ: ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಶ್ರೀ ರಕೇಶ್ವರಿ ದೇವಸ್ಥಾನ ಬಿ.ಸಿ.ರೋಡು ಆಡಳಿತ ಸಮಿತಿಯ ಸಹಕಾರದೊಂದಿಗೆ ಆಟಿ ಅಮವಾಸ್ಯೆಯ ಪ್ರಯುಕ್ತ ಜುಲೈ 24 ಗುರುವಾರ 2025 ಸಾರ್ವಜನಿಕರಿಗೆ “ಪಾಲೆದ ಕೆತ್ತೆದ ಕಷಾಯ” ವಿತರಣೆಯು ಶ್ರೀ ರಕೇಶ್ವರಿ ದೇವಸ್ಥಾನ ಬಿ.ಸಿ.ರೋಡು ಮುಂಭಾಗದಲ್ಲಿ ಬೆಳಿಗ್ಗೆ 6-30ರಿಂದ 7-30ರ ವರೆಗೆ ನಡೆಯಲಿದೆ ಎಂದು ತುಳುಕೂಟ ಬಂಟ್ವಾಳ ಹಾಗೂ ಶ್ರೀ ರಕೇಶ್ವರಿ ದೇವಸ್ಥಾನ ಬಿ.ಸಿ.ರೋಡು ಇದರ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




