Breaking
20 Jul 2025, Sun

ಬದ್ಯಾರ್ ಬಳಿ ಆಟೋ ಮಗುಚಿ ಬಿದ್ದು ಅಪಘಾತ: ರಿಕ್ಷಾ ಚಾಲಕ ಸಾವು

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಮಗುಚಿ ಬಿದ್ದು
ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಬದ್ಯಾರ್‌ ಸಮೀಪ ಜೂನ್ 22 ರಂದು ನಡೆದಿದೆ.

ಮೃತಪಟ್ಟ ಚಾಲಕ ಮಾಲಾಡಿ ನಿವಾಸಿ ಶಿವಾನಂದ ಪಿ. ಮಾಳವ (33) ಎಂದು ಗುರುತಿಸಲಾಗಿದೆ.

ಗುರುವಾಯನಕೆರೆಯಿಂದ ಅಳದಂಗಡಿಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಿವಾನಂದ ಅವರನ್ನು ತಕ್ಷಣವೇ ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಆಸ್ಪತ್ರೆಗೆ ತಲುಪುವಷ್ಟರಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಈ ಅಪಘಾತದಲ್ಲಿ ಸಹಪ್ರಯಾಣಿಕ ಶಿವರಾಜ್ ಗಾಯಗೊಂಡಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ ಸಂಚಾರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *