Breaking
20 Sep 2026, Sun

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೊತ್ತಿಟ್ಟ ಪ್ರಕರಣ: ಎಸ್ಐಟಿಯಿಂದ ಸೋಮವಾರ ಸರಕಾರಕ್ಕೆ ಮಧ್ಯಾಂತರ ತನಿಖಾ ವರದಿ ಸಲ್ಲಿಕೆ ಸಾಧ್ಯತೆ

ಧರ್ಮಸ್ಥಳ: ಗ್ರಾಮದಲ್ಲಿ ನೂರಾರು ಶವಗಳನ್ನು ಹೊತ್ತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ಮುಸುಕುಧಾರಿ ವ್ಯಕ್ತಿ ನೀಡಿರುವ ದೂರಿನ ತನಿಖೆಯು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಆರೋಪ, ಪ್ರತ್ಯಾರೋಪಗಳು, ಟ್ರೋಲ್ ಪೇಜ್ ಗಳ ಕಾರುಬಾರುಗಳು ಜೋರಾಗಿದೆ.ಈ ಮಧ್ಯೆ ಪ್ರಕರಣದ ಬಗ್ಗೆ ತೀವ್ರವಾಗಿ ತನಿಖೆ ನಡೆಸುತ್ತಿರುವ ಪ್ರಣವ್ ಮೊಹಾಂತಿ ನೇತೃತ್ವದ ಎಸ್ಐಟಿ ತಂಡ ಸೋಮವಾರ ತನ್ನ ಮಧ್ಯಾಂತರ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಅಂತ ಹೇಳಲಾಗುತ್ತಿದೆ.
ಅಂದೇ ಗೃಹ ಸಚಿವ ಡಾ. ಪರಮೇಶ್ವರ್ ವಿಧಾನಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಉತ್ತರ ನೀಡುವ ಸಾಧ್ಯತೆ ಇದ್ದು ಕುತೂಹಲಕಾರಿ ಘಟ್ಟ ತಲುಪಿದೆ.

ಈ ನಡುವೆ ಕೆಲವು ರಾಜಕೀಯ ನಾಯಕರು ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ.

ಹೀಗಾಗಿ ಕೇಸ್ ಹಳ್ಳ ಹಿಡಿಯುತ್ತಾ..? ಅಥವಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತ ಅನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Leave a Reply

Your email address will not be published. Required fields are marked *