Breaking
22 Mar 2026, Sun

ವಿಟ್ಲ- ಕನ್ಯಾನದಲ್ಲಿ ರಸ್ತೆ ಸಮಸ್ಯೆ , ಶವದ ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ

ವಿಟ್ಲ: ರಸ್ತೆ ಸಮಸ್ಯೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಶವದ ಆಕೃತಿ ರಚಿಸಿ ಆಕ್ರೋಶ ಹೊರಹಾಕಿದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ-ಕನ್ಯಾನ ರಸ್ತೆಯೂ ಹದಗೆಟ್ಟು ಹೋಗಿದ್ದು ಸಾರ್ವಜನಿಕರು ಶವದ ಆಕೃತಿ ರಚಿಸಿ ರಸ್ತೆಯಲ್ಲಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ.

ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೈರಿಕಟ್ಟೆ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸವರಾರಿಗೆ, ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ.ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಒಂದು ಬದಿಗೆ ಇಂಟರ್ ಲಾಕ್ ಅಳವಡಿಸಿದ್ದು ಕಿತ್ತು ಹೋಗಿದೆ.

ಈ ರಸ್ತೆಯು ವಿಟ್ಲದಿಂದ ಕನ್ಯಾನ, ಬಾಯಾರು, ಉಪ್ಪಳ, ಆನೆಕಲ್ಲು, ಮಂಜೇಶ್ವರ ಕಡೆಗೆ ಸಂಪರ್ಕ ಕಲ್ಲಿಸುತ್ತದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ರಸ್ತೆ ಹದಗೆಟ್ಟ ಪರಿಣಾಮ ವಾಹನ ಸಂಚಾರ ದುಸ್ತರವಾಗಿದೆ.

ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್ ಗಳು, ಗುತ್ತಿಗೆದಾರರು ಮಲಗಿರುತ್ತಾರೆ. ಯಾರೂ ತೊಂದರೆ ಕೊಡಬಾರದು ಎಂಬ ಬರಹವೊಂದನ್ನು ಬರೆಯಲಾಗಿದೆ.

Leave a Reply

Your email address will not be published. Required fields are marked *