Breaking
20 Sep 2026, Sun

ಮನೆಯೊಳಗೆ ನೇಣು ಬಿಗಿದು ಕಾಪಿನಡ್ಕ ಓಡದಕರಿಯ ನಿವಾಸಿ ಆತ್ಮಹತ್ಯೆ

ಬೆಳ್ತಂಗಡಿ: ವ್ಯಕ್ತಿಯೋರವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಂಕ ಕಾರಂದೂರಿನಲ್ಲಿ ಜೂನ್ 17 ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿ ಕಾಪಿನಡ್ಕದ ಓಡದಕರಿಯ ನಿವಾಸಿ ಧರ್ಣಪ್ಪ ಕನಡ (64) ಎಂದು ಗುರುತಿಸಲಾಗಿದೆ.

ಧರ್ಣಪ್ಪ ವಿಪರೀತ ಮದ್ಯಪಾನ ಚಟ ಹೊಂದಿದ್ದು, ಘಟನೆ ನಡೆದ ದಿನ ರಾತ್ರಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡಿದ್ದರು. ಪತ್ನಿ ಅವರನ್ನು ಮನೆಯಿಂದ ಹೊರಹಾಕಿ ಬಾಗಿಲಿಗೆ ಬೀಗ ಹಾಕಿದ್ದರು ಎನ್ನಲಾಗಿದೆ.

ಸಂಜೆಯ ವೇಳೆಗೆ ನೋಡಿದಾಗ ಮನೆಯ ಮಲಗುವ ಕೋಣೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಪತ್ನಿ ವೇಣೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *