Breaking
20 Sep 2026, Sun

ಕಣಿಯೂರು: ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ನಾಗ ಸಾನಿಧ್ಯದ ಪುನಃನಿರ್ಮಾಣ ಕಾರ್ಯಕ್ಕೆ ಮುಹೂರ್ತ

ಕಣಿಯೂರು: ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಆವರಣದಲ್ಲಿ ನಾಗ ಸಾನಿಧ್ಯದ ಪುನಃನಿರ್ಮಾಣದ ಅಂಗವಾಗಿ ಇಂದು ಕ್ಷೇತ್ರದ ನಾಗ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪುನಃನಿರ್ಮಾಣ ಕಾರ್ಯದ ಮುಹೂರ್ತ ಕಾರ್ಯಕ್ರಮ ಜರುಗಿತು.

ಈ ಪುಣ್ಯಕಾರ್ಯವು ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಯವರ ಪಾವನ ಉಪಸ್ಥಿತಿಯಲ್ಲಿ, ವೇದಮೂರ್ತಿ ನಡಿಬೈಲು ಶ್ರೀ ಶಂಕರ ನಾರಾಯಣ ಭಟ್ ಅವರ ನೇತ್ರತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ (ಸಣ್ಣಗುತ್ತು ಅಳಿಕೆ), ಚಂದ್ರಶೇಖರ ಕಣಿಯೂರು, ಜಯಾನಂದ ಕಣಿಯೂರು, ಟ್ರಸ್ಟಿಗಳಾದ ಇತರ ಸದಸ್ಯರು ಹಾಗೂ ಭಕ್ತರು ಭಾಗವಹಿಸಿ ಈ ಧಾರ್ಮಿಕ ಕ್ಷಣವನ್ನು ಸಾಕ್ಷಿಯಾಗಿಸಿದರು.

Leave a Reply

Your email address will not be published. Required fields are marked *