Breaking
19 Sep 2026, Sat

ಬೆಂಗಳೂರು: ಆನ್‌ಲೈನ್‌ನಲ್ಲಿ ತರಿಸಿದ ಕೇಕ್ ತಿಂದು ಮಗು ಸಾವು, ತಂದೆ – ತಾಯಿ ಅಸ್ವಸ್ಥ

ಬೆಂಗಳೂರು: ನಗರದ ಕೆ.ಪಿ. ಅಗ್ರಹಾರದಲ್ಲಿ ತಂದೆ, ತಾಯಿ ಅಸ್ವಸ್ಥರಾಗಿದ್ದು, ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜೂನ್ 17ರ ಸಂಜೆ ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು ಈ ಸ್ಥಿತಿಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ಕುಟುಂಬದಲ್ಲಿ ನಾಲ್ವರು ಇದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮನೆಯಲ್ಲಿ ಮೂವರೇ ಇದ್ದ ಕಾರಣ ಜೂನ್ 17ರಂದು ಸಂಜೆ ಆನ್‌ಲೈನ್‌ನಲ್ಲಿ ಕೇಕ್ ತರಿಸಿದ್ದರು. ಕೇಕ್ ತಿಂದ ಬಳಿಕ ಮಗು ತೀವ್ರವಾಗಿ ಅಸ್ವಸ್ಥಗೊಂಡು, ಬೆಳಿಗ್ಗೆ ಅಷ್ಟರಲ್ಲಿ ಸಾವನ್ನಪ್ಪಿದೆ. ಅದಾದ ಬಳಿಕ ತಂದೆ, ತಾಯಿ ಕೂಡ ಅಸ್ವಸ್ಥಗೊಂಡಿದ್ದು, ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದು, ಕಿಮ್ಸ್ ವೈದ್ಯರು ದೇಹದ ಇತರೆ ಭಾಗಗಳನ್ನು ಒಳಪಡಿಸಿ ಸಾವಿಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *