ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಂಗಳೂರು ಮೂಲದ ಸಹಾಯಕ ಪೈಲೆಟ್ ಕ್ಲೈವ್ ಕುಂದರ್

ಅಹಮದಾಬಾದ್‌: ಗುರುವಾರ ಮಧ್ಯಾಹ್ನ ಅಹಮದಾಬಾದ್‌ನ ಮೇಘನಿ ನಗರದ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ದುರದೃಷ್ಟಕರ ಏರ್ ಇಂಡಿಯಾ ವಿಮಾನ AI 171 ವಿಮಾನದಲ್ಲಿದ್ದ ಸಿಬ್ಬಂದಿಯಲ್ಲಿ ಮಂಗಳೂರು ಮೂಲದ ಮತ್ತು ಮುಂಬೈ ನಿವಾಸಿಯಾದ ಮೊದಲ ಅಧಿಕಾರಿ ಕ್ಲೈವ್ ಕುಂದರ್ ಕೂಡ ಇದ್ದರು ಎನ್ನಲಾಗಿದೆ.

ಇವರಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:38 ಕ್ಕೆ ಹೊರಟಿತ್ತು.

1100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದ ಕ್ಲೈವ್, 8200 ಗಂಟೆಗಳಿಗೂ ಹೆಚ್ಚು ಹಾರಾಟದ ಲೈನ್ ತರಬೇತಿ ಕ್ಯಾಪ್ಟನ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು. ಇಬ್ಬರು ಶಿಶುಗಳು ಸೇರಿದಂತೆ 232 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹಾರಾಟ ಆರಂಭಿಸಿದ ಸುಮಾರು ಐದು ನಿಮಿಷಗಳ ನಂತರ ಪತನಗೊಂಡಾಗ ಇವರಿಬ್ಬರೇ ಫ್ಲೈಟ್‌ಅನ್ನು ನಿಯಂತ್ರಣ ಮಾಡುತ್ತಿದ್ದರು.

ಪ್ರಯಾಣಿಕರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದು ದುರದೃಷ್ಟವಾಶತ್ ಮೃತರಾಗಿ ದ್ದಾರೆ . ವಿಮಾನದಲ್ಲಿದ್ದ ಒಟ್ಟು ಜನರ ಸಂಖ್ಯೆ 242.

Leave a Reply

Your email address will not be published. Required fields are marked *