ಮಂಗಳೂರು: ಸಿಂಗಾಪುರದ ಕಂಟೈನರ್ ಹಡಗು ಎಂ.ವಿ. ವಾನ್ ಹೈಯಲ್ಲಿ ಸ್ಫೋಟ ಸಂಭವಿಸಿ ಸಮುದ್ರ ಮಧ್ಯೆ ಭಾರೀ ಅಗ್ನಿ ದುರಂತ ನಡೆದಿದೆ.
ಜೂ.09ರಂದು ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಮುದ್ರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ 18 ಮಂದಿ ಸಿಬಂದಿಯನ್ನು ರಕ್ಷಿಸಲಾಗಿದೆ. ಆದರೆ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 7ರಂದು ಕೊಲೊಂಬೊದಿಂದ ಹೊರಟ ಹಡಗು ಜೂನ್ 10ಕ್ಕೆ ಮುಂಬಯಿಯ ನ್ಹಾವಾ ಶೇವಾ ಕಂಟೈನರ್ ಟರ್ಮಿನಲ್‌ಗೆ ಮುಂಬಯಿ ತಲುಪಬೇಕಿತ್ತು. ಆದರೆ ಬೇಪೂರ್‌ನಿಂದ 70 ನಾಟಿಕಲ್ ಮೈಲು ದೂರದಲ್ಲಿ ಹಡಗು ಸಾಗುವ ವೇಳೆ ಸ್ಫೋಟ ಉಂಟಾಗಿ, ತೈವಾನ್, ಮ್ಯಾನ್ಮಾರ್ ಮತ್ತು ಇಂಡೋನೇಶ್ಯಾ ರಾಷ್ಟ್ರದ ಪ್ರಜೆಗಳು ನಾಪತ್ತೆಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಾಗೂ ಐಸಿಜಿಎಸ್ ರಾಜ್‌ದೂತ್ ಸೇರಿದಂತೆ ಹಲವು ನೌಕೆಗಳು ಪಾಲ್ಗೊಂಡಿವೆ.
