Breaking
22 Mar 2026, Sun

ಕುಂದಾಪುರ: ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆ

ಕುಂದಾಪುರ: ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ 09 ರ ಸೋಮವಾರಂದು ನಡೆದಿದೆ.

ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್ (32) ಎಂಬವರು ಸೋಮವಾರ ಬೆಳಗ್ಗೆ 5 ಗಂಟೆಗೆ ಸ್ಕೂಟಿ ಮೂಲಕ ಮನೆಯಿಂದ ಹೊರಟಿದ್ದು, ಬಳಿಕ ಆ ಸ್ಕೂಟಿ ಹಾಗೂ ಚಪ್ಪಲಿ ಕೋಡಿ ಸೇತುವೆಯ ಬಳಿ ಪತ್ತೆಯಾಗಿದೆ. ಜೊತೆಗೆ ಸ್ಕೂಟಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಧಾವಿಸಿ ಹುಡುಕಾಟ ನಡೆಸಿದ್ದಾರೆ. ಆದರೂ ಪತ್ತೆಯಾಗದ ಹಿನ್ನಲೆ ಮಹಿಳೆ ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ಪೊಲೀಸರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ನಡೆಸಲಾಯಿತು. ಆದರೆ ಈ ವರೆಗೆ ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಈ ಕುರಿತು ಹೀನಾ ಅವರ ತಾಯಿ ಸಾದಿಕಾ ಬಾನು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *