Breaking
25 Sep 2026, Fri

ಉಜಿರೆ ಪೇಟೆಯ ಮೂರು ಅಂಗಡಿಗಳಲ್ಲಿ ಕಳ್ಳತನ: ನಗ-ನಗದು ದೋಚಿ ಕಳ್ಳರು ಪರಾರಿ

ಉಜಿರೆ: ಉಜಿರೆ ಪೇಟೆಯ ಮೂರು ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಘಟನೆ ಜೂ.8 ರಂದು ನಡೆದಿದೆ.

ಇಲ್ಲಿನ ಜನಾರ್ಧನ ದೇವಸ್ಥಾನಕ್ಕೆ ಹೋಗುವ ದ್ವಾರದ ಮುಂಭಾಗದಲ್ಲಿರುವ ಬಾಲಾಜಿ ಎಂಟರ್ ಪ್ರೈಸಸ್, ಶ್ರೀ ಗಣೇಶ ಇಲೆಕ್ಟ್ರಿಕಲ್, ಹಳೆಯ ಮಧುರ ಪ್ರಿಂಟರ್ಸ್ಗೆ ನುಗ್ಗಿ ನಗ- ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಾಜಿ ಎಂಟರ್ ಪ್ರೈಸಸ್ ನಿಂದ 30,000 ನಗದು ಮತ್ತು ಗ್ಲಾಸ್ ಹೊಡೆದು ಶ್ರೀ ಗಣೇಶ ಇಲೆಕ್ಟ್ರಿಕಲ್ ಹಾಗೂ ಹಳೆಯ ಮಧುರ ಪ್ರಿಂಟರ್ಸ್ಗೆ ನುಗ್ಗಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ ಮೂರು ಅಂಗಡಿ ಕೋಣೆಗಳು ಒಂದಕ್ಕೊಂದು ಹತ್ತಿರವಿದ್ದು ಕೆಲವೇ ನಿಮಿಷಗಳಲ್ಲಿ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *