ಕಡಬ: ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಕಡಬದ ಇಂಚ್ಲಪಾಡಿ ಸೇತುವೆ ಬಳಿ ಜೂ.8 ರಂದು ನಡೆದಿದೆ.
ಇಂಚ್ಲಪಾಡಿ ನಿವಾಸಿ ಜಯಾನಂದ ಶೆಟ್ಟಿ ಎಂಬವರ ಪುತ್ರ ಚೇತನ್ ಶೆಟ್ಟಿ (21) ಮೃತ ಯುವಕನಾಗಿದ್ದಾನೆ.ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಚೇತನ್ ರಜೆ ಹಿನ್ನೆಲೆ ಮನೆಯಲ್ಲಿದ್ದರು.

ಬೆಳಿಗ್ಗೆ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ಹೋದ ಚೇತನ್ ಮಧ್ಯಾಹ್ನ ಇಚ್ಲಂಪಾಡಿ ಸೇತುವೆ ಬಳಿ ಗುಂಡ್ಯ ಹೊಳೆಗೆ ಸ್ನಾನಕ್ಕೆಂದು ಹೋಗಿದ್ದಾರೆ.ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕಡಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

