Breaking
13 May 2026, Wed

ಬಂಟ್ವಾಳ: ಆರ್. ಸಿ. ಬಿ. ವಿಜಯೋತ್ಸವದಲ್ಲಿ ದುರಂತ: ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿದ ಪ್ರಭಾಕರ ಪ್ರಭು

ಬಂಟ್ವಾಳ: ಆರ್. ಸಿ. ಬಿ. ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಮಂದಿ ಮೃತಪಟ್ಟ ಘಟನೆಗೆ ರಾಜ್ಯ ಸರಕಾರ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಿ 5 ದಕ್ಷ ಪೊಲೀಸ್‌ ಅಧಿಕಾರಿಗಳನ್ನು ಅಮಾನತ್ತುಗೊಳಿಸಿರುವುದಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕಿಡಿಕಾರಿದ್ದಾರೆ.

ಆರ್. ಸಿ. ಬಿ. ಅಭಿಮಾನಿಗಳ ಬೆಂಬಲ ಪಡೆಯುವ ರಾಜಕೀಯ ದುರುದ್ದೇಶದ ಆಸೆಯಲ್ಲಿ ಸರಕಾರ ವತಿಯಿಂದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕೋಸ್ಕರ ಪ್ರಚಾರ ಪಡೆಯುವ ಉದ್ದೇಶಕ್ಜೆ ಯಾವುದೇ ಪೊಲೀಸ್ ರಕ್ಷಣೆ ಇಲದೇ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿರುವುದು. ಸರಕಾರದ ವೈಫಲ್ಯವೇ ಸರಿ. ಈ ಎಲ್ಲಾ ಕಾರಣಗಳಿಂದ ಬಹು ಜನರ ಅಪೇಕ್ಷೆ ಮೇರೆಗೆ ವಿನಾ ಕಾರಣ ಅಮಾನತು ಗೊಂಡಿರುವ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದು ಕೊಳ್ಳಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಪೊಲೀಸ್ ಅಧಿಕಾರಿಗಳ ಕಾನೂನು ನಿಯಮ ಉಲ್ಲಂಘನೆ ಆಗುತ್ತಿರುವ ವಿಷಯದಲ್ಲಿ ಏನಾದ್ರೂ ಅಮಾಯಕರ ಜೀವದ ಮೇಲೆ ಪರಿಣಾಮ ಆದರೆ, ಜೆಲ್ಲೆಯ ಪೊಲೀಸ್ ವರಿಷ್ಟಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಸಹ ಇಂತಹದ್ದೇ ಮಾದರಿಯಲ್ಲಿ ಸರಕಾರದ ವತಿಯಿಂದ ಅಮಾನತು ಅದ್ರೆ ಅಚ್ಚರಿ ಪಡಬೇಕಾಗಿಲ್ಲ. ಈ ರೀತಿಯಲ್ಲಿ ಒಟ್ಟಾರೆಯಾಗಿ ಸರಕಾರದ ಆಡಳಿತ ವೈಫಲ್ಯದ ಕಾರಣಕ್ಕಾಗಿ ಮುಖ್ಯ ಮಂತ್ರಿ ಗಳು ಹಾಗೂ ಉಪ ಮುಖ್ಯ ಮಂತ್ರಿಗಳು ರಾಜೀನಾಮೆ ನೀಡಬೇಕಾಗಿ ಆಗ್ರಹಿಸಿದ್ದಾರೆ.

ಸರಕಾರ ಒಮ್ಮೆ ಎಲ್ಲಾರಿಗೂ ಉಚಿತ ಟಿಕೇಟ್ ಅಂತಾ ಘೋಷಣೆ ಮಾಡಿದ್ದು ಹೀಗಾಗಿ ಜನಸ್ತೋಮ ಜಮಯಿಸಿತು. ಬಳಿಕ ಟಿಕೇಟ್ ಗೆ ಫೀಸ್ ವಹಿಸಿರುವುದು, ಸರಕಾರದ ದ್ವಂದ್ವ ಮತ್ತು ಗೊಂದಲದ ನಿರ್ಧಾರ ಕಾನೂನು ಬಾಹಿರವಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ಸರಕಾರದ  ಪ್ರಚಾರಕ್ಕಾಗಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮದಿಂದ ರಾಜ್ಯದ 11 ಜನ  ಅಮಾಯಕರು ಜೀವ ತೆರಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *