ಬಂಟ್ವಾಳ: ತಾಲೂಕು ಬಿಸಿರೋಡ್ ಸಮೀಪದ ಕೆ. ಎಸ್. ಆರ್. ಟಿ.ಸಿ . ಬಸ್ ಸ್ಟಾಂಡ್ ವಾತಾವರಣದಲ್ಲಿ ಹಾಡು ಹಗಲೇ ಅವಿವಾಹಿತ ಹುಡುಗಿಯನ್ನು ಸಾರ್ವಜನಿಕ ಎದುರಲ್ಲೇ ಹರಿತವಾದ ಕತ್ತಿಯಿಂದ ಹತ್ಯೆ ಮಾಡಿದ ಕ್ರೂರಿ ಆರೋಪಿ ಯಾರಾದ್ರೂ ಅವನನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಯೊಂದಿಗೆ ಭವಿಷ್ಯದಲ್ಲಿ ನ್ಯಾಯಾಲಯ ಮರಣ ದಂಡನೆ ವಿಧಿಸುವಂತಹ ಪ್ರಕರಣ ದಾಖಲಿಸಬೇಕು ಎಂದೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಯವರನ್ನು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ಒಂದು ಹುಡುಗಿಯನ್ನು ಸಾರ್ವಜನಿಕವಾಗಿ ಹಾಡು ಹಗಲೇ ಈ ರೀತಿಯಾಗಿ ಕೊಲೆ ಮಾಡಿದ್ರೆ ಇಡೀ ಮಹಿಳಾ ಸಮಾಜ ಹೆದರುವ ಪ್ರಸಂಗ ಎದುರಾಗಿದೆ. ಸಮಾಜದಲ್ಲಿ ಆತಂಕದ ಭಾವನೆ ಉಂಟಾಗಿದೆ. ಈ ರೀತಿಯಲ್ಲಿ ಪದೇ ಪದೇ ಪ್ರಕರಣಗಳು ಮುಂದುವರಿಯುತ್ತಾ ಇದ್ದರೂ ಸಹ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈ ಗೊಳ್ಳಲು ವಿಫಲವಾಗಿದೆ.

ಏನೂ ತಪ್ಪು ಮಾಡದ ಹುಡುಗಿಯ ಹತ್ಯೆ ಹಂತಕನನ್ನು ತಕ್ಷಣವೇ ಬಂಧಿಸಬೇಕು ಹಾಗೂ ಅವನಿಗೆ ಸಹಕಾರ ನೀಡಿರುವ ಸಹ ಆರೋಪಿಗಳನ್ನು ಸಹ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿಯ ಹತ್ಯೆಯಿಂದ ಹೆಣ್ಣು ಮಕ್ಕಳು ಮುಕ್ತವಾಗಿ ನಡೆದಾಡಲು ಆತಂಕದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಮಾತೆಯರ ರಕ್ಷಣೆ ಭಾರತೀಯ ಜನತಾ ಪಾರ್ಟಿಯ ಆಧ್ಯ ಕರ್ತವ್ಯವೂ ಆಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲು ಸಿದ್ದವಿದೆ.

ಆದುದರಿಂದ ಯಾವುದೇ ಮುಲಾಜಿಲ್ಲದೆ ಆರೋಪಿ ಮತ್ತು ಸಹಕಾರ ಮಾಡಿದವರನ್ನು ಬಂಧಿಸಿ ಮರಣ ದಂಡನೆ ಆಗುವಂತೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ಪೊಲೀಸ್ ಇಲಾಖೆಯನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು ಆರ್. ಚೆನ್ನಪ್ಪ ಕೋಟ್ಯಾನ್ ಒತ್ತಾಯ ಪಡಿಸುತಿದ್ದೇನೆ.



