ಬಂಟ್ವಾಳ: ಸಜೀಪ ನಡು ಶ್ರೀ ಕ್ಷೇತ್ರದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ ಹಾಗೂ ಆಶ್ಲೇಷ ಬಲಿ ಹೋಮ ಭಕ್ತಿಭಾವದಿಂದ ನೆರವೇರಿತು.

ದೇವಸ್ಥಾನದ ಸಜಿಪ ಮಾಗಣೆತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕರಾದ ಗಣಪತಿ ಮಹಾಬಲೇಶ್ವರ ಭಟ್, ಜಿ. ರಾಮಕೃಷ್ಣ ಭಟ್, ಪ್ರವೀಣ್ ಭಂಡಾರಿ, ಕಿಶನ್ ಸೇಣವ, ಸುಭಾಷ್ ಶೆಟ್ಟಿ, ರಾಮ ಬರೆ, ಸುಧಾಕರ ಕೆ.ಟಿ., ಸೋಮನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.




