Breaking
27 Mar 2026, Fri

ಬೆಂಗಳೂರಿನ ಬಾಷ್ ಕಂಪೆನಿಯ ತಂಡ ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ

ಬೆಳ್ತಂಗಡಿ: ತಾಲೂಕಿನ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಾಮಗಾರಿಯನ್ನು ಬೆಂಗಳೂರಿನ ಬಾಷ್ ಕಂಪೆನಿಯ ಸಿಬ್ಬಂದಿಗಳ ತಂಡ ಜೂ.5 ರಂದು ಭೇಟಿ ಮಾಡಿತು.

ಈ ವೇಳೆ ಕಂಪನಿಯ ಎಚ್ ಆರ್ ಮ್ಯಾನೇಜರ್ ಪ್ರದೀಪ್ ಮತ್ತು ತಂಡದವರಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗತೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ನ ಪ್ರಾಂಶುಪಾಲರಾದ ವಿಶ್ವೇಶ್ವರ ಪ್ರಸಾದ್, ಸೇವಾಧಾಮ ಸಂಸ್ಥೆಯ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *