ಕಾಸರಗೋಡು: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಎರಡು ವರ್ಷದ ಮಗು ಮೃತ್ಯು

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಬಿದ್ದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟ ಘಟನೆ ಮುಳ್ಳೇರಿಯ ಕಾರ್ಲೇ ಎಂಬಲ್ಲಿ ಜೂನ್ 5ರಂದು ನಡೆದಿದೆ.

ಮೃತಪಟ್ಟ ಮಗು ಎಂ. ಹರಿದಾಸ್ – ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ ಎಂದು ತಿಳಿದುಬಂದಿದೆ.

ಪೇಟೆಗೆ ತೆರಳಿ ಮರಳುತ್ತಿದ್ದಾಗ ಮನೆಯ ರಸ್ತೆಯಲ್ಲಿ ಕಾರು ಸ್ಟಾರ್ಟ್ ಆಗದ ಹಿನ್ನಲೆಯಲ್ಲಿ ತಾಯಿ ಹಾಗೂ ಮಗು ಹೃದ್ಯಾನಂದ ಕೆಳಗಿಳಿದಿದ್ದು, ಕಾರನ್ನು ತಾಯಿ ತಳ್ಳುತ್ತಿದ್ದ ಸಂದರ್ಭದಲ್ಲಿ ಮುಂದಕ್ಕೆ ಕಾರು ಚಲಿಸಿದ ಸಂದರ್ಭ ಮಗು ಕಾರಿನಡಿಗೆ ಸಿಲುಕಿ ಈ ದುರಂತ ಸಂಭವಿಸಿದೆ.

ಸ್ಥಳೀಯರ ನೆರವಿನಿಂದ ಮಗುವನ್ನು ಹೊರತೆಗೆದು ಮುಳ್ಳೇರಿಯದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗುವಿನ ಪ್ರಾಣ ಉಳಿಸಲಾಗಲಿಲ್ಲ ಎಂದು ಮಾಹಿತಿ ಲಭ್ಯ ವಾಗಿದೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *