ಉಡುಪಿ : ಉದ್ಯಾವರದಲ್ಲಿರುವ ಕಿಯಾ ಶೋ ರೂಂ ಬಳಿ ಇಂದು (ಜೂ.06) ಮುಂಜಾನೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಹರಿಯಾಣ ಮೂಲದ ವ್ಯಕ್ತಿ ಕೆಲವೇ ದಿನಗಳ ಹಿಂದೆ ಎಸ್‌ಯುವಿ ಕಾರು ಖರೀಸಿದ್ದು ,
ಇಂದು ಮುಂಜಾನೆ ಮಂಗಳೂರಿನಿಂದ ಹರಿಯಾಣ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಈ ಸಂದರ್ಭ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಾಪು ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.


