Breaking
13 May 2026, Wed

ಪುತ್ತೂರಿನಲ್ಲಿ ಮುಂದುವರಿದ ಪೋಲೀಸರ ನಡುರಾತ್ರಿಯ ಭೇಟೆ: ಹಿರಿಯ ಆರ್.ಎಸ್.ಎಸ್ ಮುಖಂಡರ ಮನೆಗೂ ಪೋಲೀಸ್ ಭೇಟಿ

ಪುತ್ತೂರು: ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆಗಳ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದ.ಕ ಜಿಲ್ಲೆಗೆ ನೂತನವಾಗಿ ನೇಮಕವಾಗಿರುವ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ಕಳೆದೆರಡು ದಿನದಿಂದ ಜಿಲ್ಲೆಯ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅದರಂತೆ ನಿನ್ನೆ ರಾತ್ರಿ 12 ಗಂಟೆಗೆ ಆರ್ಎಸ್ಎಸ್ ಹಿರಿಯ ಮುಖಂಡ ಉಪ್ಪಿನಂಗಡಿಯ ಯು.ಜಿ. ರಾಧಾಕೃಷ್ಣ ಮನೆಗೆ ಪೋಲೀಸರು ಭೇಟಿ ನೀಡಿದ್ದಾರೆ.ಅಲ್ಲದೆ ಅವರ ಫೋಟೋ ಕೂಡ ತೆಗಿದಿದ್ದು, ಪೋಲೀಸರ ಈ ಕ್ರಮಕ್ಕೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಈ ಸಂಧರ್ಭದಲ್ಲಿ ಪೋಲೀಸರ ಈ ನಡೆಯನ್ನು RSS ಮುಖಂಡ ಯು.ಜಿ.ರಾಧಾ ಭಟ್ ಕಟುವಾಗಿ ಪ್ರಶ್ನಿಸಿದ್ದಾರೆ.ಸುಳ್ಯದ ಇನ್ನೋರ್ವ RSS ಹಿರಿಯ ಮುಖಂಡ ನಾ. ಸೀತಾರಾಮ ಮನೆಗೂ ಪೋಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *