Breaking
19 Sep 2026, Sat

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಮತ್ತೆ ಪೊಲೀಸ್ ನೋಟೀಸ್

ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲಗೆ ಎರಡನೇ ಬಾರಿಗೆ ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.

ಪೆಹಲ್ಗಾಮ್ ಉಗ್ರ ದಾಳಿ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ ಸಂದರ್ಭ ಪುತ್ತಿಲ ಪ್ರಚೋದನಕಾರಿ ಭಾಷಣ ಮಾಡಿದ್ದಲ್ಲದೆ,ಇಸ್ಲಾಂ ಧರ್ಮವನ್ನ ಭಯೋತ್ಪಾದನೆಗೆ ಹೋಲಿಸಿ ಭಾಷಣ ಮಾಡಿದ್ದರೆಂದು ಅಶ್ರಫ್ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅದರಂತೆ ಇಂದು ಪುತ್ತಿಲರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.ನೋಟೀಸ್ ಸಿಕ್ಕಿದ ತಕ್ಷಣ ವಿಚಾರಣೆಗೆ ಹಾಜರಾಗಬೇಕೆಂದು ಉಲ್ಲೇಖಿಸಲಾಗಿದೆ.

ನಿನ್ನೆಯಷ್ಟೇ ಗಡಿಪಾರು ನೋಟೀಸ್ ನೀಡಿದ್ದ ಪುತ್ತೂರು ನಗರ ಠಾಣಾ ಪೊಲೀಸರು ಇದೀಗ ಮತ್ತೆ ಅರುಣ್ ಕುಮಾರ್ ಪುತ್ತಿಲಗೆ ನೋಟೀಸ್ ನೀಡಿರುವುದು ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *