Breaking
19 Sep 2026, Sat

ಇಳಂತಿಲದಲ್ಲಿ ವಾಹನ ಸಂಚಾರಕ್ಕೆ ರಸ್ತೆ ಸಂಪೂರ್ಣ ಮುಕ್ತ: ಮಾಜಿ ಅಧ್ಯಕ್ಷರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಬೆಳ್ತಂಗಡಿ: ತಾಲೂಕಿನ ಇಳಂತಿಲ ಗ್ರಾಮದ ಹಾರಕೆರೆ ಎಂಬಲ್ಲಿ ಮೇ.3 ರಂದು ವಿಪರೀತ ಮಳೆಗೆ ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿದು ಮುಖ್ಯರಸ್ತೆ ವಾಹನ ಸಂಚಾರಕ್ಕೆ ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು.

ಇಳಂತಿಲ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ತಿಮ್ಮಪ್ಪ ಗೌಡರವರು ಸ್ಥಳಕ್ಕೆ ಭೇಟಿ ನೀಡಿ ಹಿಟಾಚಿ ಮೂಲಕ ಸ್ಥಳದಲ್ಲಿದ್ದ ಮಣ್ಣು ತೆರವು ಕಾರ್ಯ ಹಾಗೂ ಆ ಸ್ಥಳದ ಡಾಮಾರು ರಸ್ತೆಯಲ್ಲಿ ಕೆಸರಿದ್ದ ಕಾರಣ ದ್ವಿಚಕ್ರ, ತ್ರಿಚಕ್ರ ವಾಹನಕ್ಕೆ ಅಡಚಣೆ ಉಂಟಾಗಿತ್ತು.

ಇದನ್ನು ಗಮನಿಸಿದ ಅವರು ಟ್ಯಾಂಕರ್ ನಲ್ಲಿ ನೀರು ಹಾಯಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿದರು.

ಈ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ವಿಪರ್ಯಾಸ ಎಂದರೆ ಹಾನಿ ಸಂಭವಿಸಿದ ಸ್ಥಳಕ್ಕೆ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಥವಾ ಸದಸ್ಯರಾಗಲಿ ಭೇಟಿ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *