Breaking
19 Sep 2026, Sat

ಪುತ್ತೂರಿನ ಸರ್ವೆ ವ್ಯಾಪ್ತಿಯಲ್ಲಿ ಹತ್ತಕ್ಕೂ ಮಿಕ್ಕಿದ ಮನೆಗಳು ಭಾಗಶಃ ಮುಳುಗಡೆ: ಮನೆ ಮಂದಿಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್

ಪುತ್ತೂರು: ತಾಲೂಕಿನ ಗೌರಿ ಹೊಳೆ ಸೇತುವೆ ತುಂಬಿ ಹರಿದ ಪರಿಣಾಮ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ಸವಣೂರು ಸಮೀಪದ ಸರ್ವೆ ಎಂಬಲ್ಲಿ ನಡೆದಿದೆ.

ನಿನ್ನೆ ರಾತ್ರಿಯಿಂದ ರಸ್ತೆಯ ಸಂಪರ್ಕ ಕಡಿತಗೊಂಡಿದ್ದು, ಹತ್ತಕ್ಕೂ ಮಿಕ್ಕಿದ ಮನೆಗಳು ಭಾಗಶಃ ಮುಳುಗಡೆಯಾಗಿದೆ.

ಅಪಾಯದಲ್ಲಿದ್ದ ಮನೆ ಮಂದಿಯನ್ನು ಎನ್ ಡಿ ಆರ್ ಎಫ್ ತಂಡ ರಕ್ಷಣೆ ಮಾಡಿದೆ.

ಇದೇ ಮೊದಲ ಬಾರಿಗೆ ಗೌರಿ ಹೊಳೆಯಲ್ಲಿ ಪ್ರವಾಹ ಭೀತಿ ಸೃಷ್ಠಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *