Breaking
20 Sep 2026, Sun

ದ.ಕ ಜಿಲ್ಲೆಗೆ ಆರೆಂಜ್ ಅಲರ್ಟ್: ಶಾಲೆಗಳಿಗೆ ರಜೆ

ದ.ಕ: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ‌‌ ಭಾರೀ ಮಳೆಯಾಗಿದ್ದು ಇಂದು (ಮೇ.30) ಕೂಡ ವರುಣಾರ್ಭಟ ಮುಂದುವರಿಯುವ ಸಾಧ್ಯತೆ ಇದೆ.

ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗೆ ರಜೆ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ‌ಅಲರ್ಟ್ ಘೋಷಿಸಿರುವ ಕಾರಣ ಅಂಗನವಾಡಿ, ಪ್ರಾಥಮಿಕ‌ ಹಾಗೂ ಪ್ರೌಡ ಶಾಲೆ, ಖಾಸಗಿ, ಸರಕಾರಿ ಅನುದಾನಿತ‌ ಶಾಲೆಗಳಿಗೆ ಜಿಲ್ಲಾಧಿಕಾರಿ ಮುಲೈಮುಹಿಲನ್ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಮುಂಜಾಗೃತಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಮಕ್ಕಳು, ಸಾರ್ವಜನಿಕರು ನೀರು ನಿಲ್ಲುವ ತಗ್ಗು‌ಪ್ರದೇಶಗಳಿಗೆ ತೆರಳದಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *