Breaking
22 Mar 2026, Sun

ಮುಸ್ಲಿಂ ಸಮುದಾಯದ ಅವಹೇಳನ ಆರೋಪ : ಬೆಳ್ತಂಗಡಿಯ ಕಾಜೂರಿನ ಯುವಕನ ವಿರುದ್ಧ ದೂರು

ಬೆಳ್ತಂಗಡಿ : ತಾಲೂಕಿನ ಕಾಜೂರಿನ ನಿವಾಸಿ ಸಂದೀಪ್ ಎಂಬಾತ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿದ್ದಾನೆ ಎಂದು ಆರೋಪಿ ಎಸ್ಡಿಪಿಐ ಕಾಜೂರು ನಾಯಕರ ನಿಯೋಗದಿಂದ ಮೇ.28 ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.

ಮುಸ್ಲಿಂ ಸಮುದಾಯದ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಧಾರ್ಮಿಕ ನಿಂಧನೆ ಮಾಡಿದ್ದಾನೆ. ಮಾತ್ರವಲ್ಲ ವಾಟ್ಸಪ್ಪ್ ಸ್ಟೇಟಸ್ ನಲ್ಲಿ ಇತ್ತೀಚಿಗೆ ಕೊಳ್ತ ಮಜಲುವಿನಲ್ಲಿ ನಡೆದ ಹತ್ಯೆಯ ಭಾಗವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿದ್ದಾನೆ.

ಕಾಜೂರಿನ ಪರಿಸರದಲ್ಲಿ ಹಿಂದೂ ಮುಸಲ್ಮಾನ ಭಾಂದವರು ಸುಮಾರು ವರ್ಷಗಳಿಂದ ಸೌರ್ಹಾದತೆಯಿಂದ ಬಾಳುತ್ತಿದ್ದಾರೆ. ಆತನ ಸ್ಟೇಟಸ್ ನಿಂದಾಗಿ ಹಿಂದೂ ಹಾಗೂ ಮುಸಲ್ಮಾನರ ನಡುವೆ ಅಪನಂಬಿಕೆಯನ್ನು ಹುಟ್ಟಿಸಿ ಸಾಮರಸ್ಯವನ್ನು ಕೆಡಿಸಿ ಆ ಮೂಲಕ ಹಿಂದೂ ಹಾಗೂ ಮುಸಲ್ಮಾನರ ನಡುವೆ ಕೋಮು ಪ್ರಚೋದನೆಯನ್ನು ಉಂಟು ಮಾಡುತ್ತಿದ್ದಾನೆ.

ಮಾತ್ರವಲ್ಲ ಇದರಿಂದ ಸಮಾಜದಲ್ಲಿ ಆಶಾಂತಿ ಉಂಟು ಮಾಡುವ ಪ್ರಯತ್ನ ಹಾಗೂ ಇಂತಹ ಕೃತ್ಯಯಿಂದ ಕೋಮು-ಗಲಭೆಗಳು ಆಗುವ ಸಾಧ್ಯತೆ ಇದೆ. ಆದುದರಿಂದ ತಾವುಗಳು ಸಂದೀಪ್ ಎಂಬಾತನನ್ನು ಈ ಕೂಡಲೇ ಸೂಕ್ತ ತನಿಖೆ ನಡೆಸಿ ಕಠಿನ ಕಾನೂನು ಕ್ರಮಗಳ ಅಡಿಯಲ್ಲಿ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಂದರ್ಭ ಎಸ್ಡಿಪಿಐ ಕಾಜೂರು ಬ್ರಾಂಚ್ ಉಪಾಧ್ಯಕ್ಷರು ಪಿ.ಎ ಕಬೀರ್, ಕಾರ್ಯದರ್ಶಿ ಎಂ. ಅಶ್ರಫ್, ಜೊತೆಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಗೂ ಶಂಸುದ್ದೀನ್ ಕಾಜೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *