ಬಂಟ್ವಾಳ : ವೀರ ಹನುಮಾನ್ ಮಂದಿರ ಸುಜೀರು ದತ್ತನಗರ ಇದರ ಅಶ್ರಯದಲ್ಲಿ 14 ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಶ್ರೀ ವೀರ ಹನುಮಾನ್ ಮಂದಿರದಲ್ಲಿ ಮೇ 25 ರಂದು ಆದಿತ್ಯವಾರ ನಡೆಯಿತು.

ಪುಸ್ತಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಯಶೊದ ಶೆಟ್ಟಿ ಸುಜೀರ್ ಗುತ್ತು. ಪೊಳಲಿ ಗಿರಿಪ್ರಕಾಶ್ ತಂತ್ರಿ.ಮಂದಿರದ ಅದ್ಯಕ್ಷ ಸುರೇಂದ್ರ ಕಂಬಳಿ ಸುಜೀರ್ ಬೀಡು.ಸಂಜೀವ ಬೆಲ್ಚಾಡ ಬೆಂಜನ್ ಪದವು. ದಾಮೊದರ್ ಸಪಲ್ಯ. ಸುಜೀರ್, ಸಂಜೀವ ಪೂಜಾರಿ ಸುಜೀರ್ ದೆಯ್ಯಡಕ, ಮಹಿಳಾ ಸೇವಾ ಬಳಗದ ಅದ್ಯಕ್ಷೆ ಮೀನಾಕ್ಷಿ. ರವೀಂದ್ರ ದತ್ತನಗರ ಸಂದೀಪ್ ದತ್ತನಗರ, ಯಸ್. ಜಯ ಬೆಲ್ಚಾಡ ಉಪಸ್ಥಿತರಿದ್ದರು.

14ನೇ ವರ್ಷದ ಉಚಿತ ಪುಸ್ತಕವನ್ನು ನಿಶಿತ್ ಶೆಟ್ಟಿ ಸುಜೀರ್ ಗುತ್ತು ಇವರು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಳೆದ ತಿಂಗಳು ಕಾಶ್ಮೀರದಲ್ಲಿ ಉಗ್ರರಿಗೆ ಬಲಿಯಾದ ಹುತಾತ್ಮರಿಗೆ ಶ್ರದ್ದಾಂಜಲಿ ಹಾಗೂ ಸಿಂದೂರ ವಿಜಯ ಕಾರ್ಯಕ್ರಮ ನಡೆಯಿತು.



