ಬೆಳ್ತಂಗಡಿ: ಖಾಸಗಿ ಬಸ್ ನ ಸ್ಟೇರಿಂಗ್ ಲಾಕ್ ಆಗಿ ಬಸ್ ಚರಂಡಿಯತ್ತ ಸಾಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯದಲ್ಲಿ ಮೇ. 27ರಂದು ನಡೆದಿದೆ.
ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ಬರುತ್ತಿದ್ದ ವರುಣ್ ಎಂಬ ಹೆಸರಿನ ಖಾಸಗಿ ಬಸ್‌ನಲ್ಲಿ ಸ್ಟೇರಿಂಗ್ ಲಾಕ್ ಆಗಿ ಸಮಸ್ಯೆ ಉಂಟಾಗಿದೆ. ಈ ವೇಳೆ ಬಸ್ ನೇರವಾಗಿ ಚರಂಡಿಯತ್ತ ಸಾಗಿದೆ ಎನ್ನಲಾಗಿದೆ.
ಬಸ್ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆಯಲ್ಲಿ ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

