ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ನಟಿಸಿ ಫೇಸಮ್ ಆಗಿದ್ದ ನಟ ಶ್ರೀಧರ್ ನಾಯಕ್(47) ಅವರು ಮೇ .26ರ ತಡರಾತ್ರಿ ನಿಧನ ಹೊಂದಿದ್ದಾರೆ.

ಇತ್ತೀಚೆಗೆ ಶ್ರೀಧರ್ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಅವರಿಗೆ ಸಹಾಯ ಮಾಡುವಂತೆ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.

ಜೊತೆಗೆ ಗುರುತೇ ಸಿಗದಷ್ಟು ಬದಲಾಗಿ ಬೆಡ್ ಮೇಲೆ ಮಲಗಿದ್ದ ನಟನನ್ನು ನೋಡಿ ಹಲವರು ಶಾಕ್‌ಗೆ ಕೂಡ ಒಳಗಾಗಿದ್ರು.

ವಿಚಿತ್ರವಾದ ಸೋಂಕಿಗೆ ಒಳಗಾಗಿದ್ದ ನಟ ಶ್ರೀಧರ್ ಅವರು ಸೋಮವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.


