ವಿಜಯಡ್ಕ : ಇಲ್ಲಿನ ಸಂತ ಲಾರೆನ್ಸರ ಚರ್ಚಿನಲ್ಲಿ ವಂ.ಧರ್ಮಗುರು ಎಡ್ವಿನ್ ಸಂತೋಷ್ ಮೊನಿಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.



ಹಿಂದಿನ 6 ವರ್ಷಗಳಿಂದ ಚರ್ಚಿನಲ್ಲಿ ನೀಡಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವದ ಸನ್ಮಾನ ಪತ್ರ ಫಲಪುಷ್ಪಗಳನ್ನು ನೀಡಿ ಗೌರವದಿಂದ ಸನ್ಮಾನಿಸಲಾಯಿತು.


ಸನ್ಮಾನದ ಬಳಿಕ ಮಾತನಾಡಿದ ಅವರು ಈ ಚರ್ಚಿನಲ್ಲಿ ನಡೆದ ಎಲ್ಲಾ ಕಾರ್ಯಗಳು ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.



ಕಾರ್ಯಕ್ರಮದಲ್ಲಿ ಡೋಲರಸ್ ಕಾನ್ವೆಂಟಿನ ಧರ್ಮಭಗಿನ ಸಿ.ಹೆಲೆನ್ ಡಿಸೋಜ, ಸಂತ ಲಾರೆನ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿ.ವೀರ ಸಾಂತನೀಸ್ , ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆನ್ರಿ ಡಿಸೋಜ ಹಾಗೂ ಕಾರ್ಯದರ್ಶಿ ರವಿ ಡಿಸೋಜ ಹಾಜರಿದ್ದರು.


ಹೆನ್ರಿ ಡಿಸೋಜ ಸ್ವಾಗತಿಸಿ ,ಜೀವನ್ ಪ್ರಕಾಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಪವಿತ್ರ ಶಿಲುಬೆ ವಾಳೆಯ ಗುರ್ಕಾರ್ ರಾದ ಗಟ್ರೂಟ್ ಡಿಸೋಜ ರವರು ವಂದಿಸಿದರು.


