Breaking
21 Sep 2026, Mon

ಸುಳ್ಯದಲ್ಲಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಲೈನ್ ಮ್ಯಾನ್

ಸುಳ್ಯ: ಲೈನ್ ಮ್ಯಾನ್‌ವೊಬ್ಬರು ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಘಟನೆ ಸುಳ್ಯದ ಕಲ್ಲುಗುಂಡಿ ಸಂಪಾಜೆಯ ಕಡಪಾಲದ ವರ್ಗೀಸ್ ತಿರುವಿನಲ್ಲಿ ಮೇ.26 ರಂದು ನಡೆದಿದೆ.

ಲೈನ್ ಮ್ಯಾನ್ ನವೀನ್ ಎಂಬವರಿಗೆ ಕರೆಂಟ್ ಶಾಕ್ ಹೊಡೆದಿದೆ.

ಇಲ್ಲಿನ ಕಲ್ಲುಗುಂಡಿ ಸಂಪಾಜೆಯ ಕಡಪಾಲದ ವರ್ಗೀಸ್ ತಿರುವಿನಲ್ಲಿ ಕರೆಂಟ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *