ಮಂಗಳೂರು : ತಾಲೂಕಿನ ಕೋಟೆಕಾರ್ ನಿವಾಸಿಯಾಗಿರುವ ರೇಣುಕಾ ಇವರ ಪತಿ ಮರಣ ಹೊಂದಿದ್ದು, ಅವರ ಮರಣದ ನಂತರ ಜೀವನ ಕಷ್ಟವಾಗಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು.

ಮನವಿಗೆ ಸ್ಪಂದಿಸಿ ಜೀವನ ನಿರ್ವಹಣೆಗೆ ಹಾಗೂ ಅವರ ಮಗನ ವಿದ್ಯಾಭ್ಯಾಸಕ್ಕಾಗಿ ತಂಡದ ಅಧ್ಯಕ್ಷ ರಾದ ಸಂದೀಪ್ ಮಿಜಾರ್ ಇವರ ಮೂಲಕ ವೈದ್ಯನಾಥ ದೇವಸ್ಥಾನ ಉಳ್ಳಾಲ ಬೈಲ್ ಇಲ್ಲಿ 20,000/-ರೂಪಾಯಿಯ ಧನಸಹಾಯದ ಚೆಕ್ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ತಂಡದ ಸೇವಾ ಮಾಣಿಕ್ಯರ್ ಉಪಸ್ಥಿತರಿದ್ದರು.



