Breaking
21 Sep 2026, Mon

ಮಹಾ ಮಳೆ ಮಂಗಳೂರಿನ ಪಂಪ್ ವೆಲ್ ಸೇತುವೆ ಬಳಿ ಪ್ರವಾಹ ಭೀತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ನಗರದ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ.

ಭಾನುವಾರ ಸುರಿದ ಭಾರೀ ಗಾಳಿ ಮಳೆಗೆ ಕಾಲುವೆ ತುಂಬಿ ಹರಿದಿದೆ. ಈ ವೇಳೆ, ಫೈಓವರ್ ಕೆಳಭಾಗದಲ್ಲಿ ಕೆಸರು ನೀರು ರಸ್ತೆಗೆ ನುಗ್ಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಪಂಪೈಲ್ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿದ್ದು, ಜನರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು, ಕಾಸರಗೋಡು, ಉಡುಪಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂಗಾರು ಆಗಮನದಲ್ಲೇ ಅಬ್ಬರ ತೋರಿಸಿದೆ. ಹವಾಮಾನ ಇಲಾಖೆ ಮೇ 28ರ ವರೆಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *