ಪುತ್ತೂರು : ಭಾರೀ ಮಳೆಗೆ ಪುತ್ತೂರು ನಗರಸಭೆಯ ಕಾಂಪೌಂಡ್ ಕುಸಿದು ಆಟೋ ರಿಕ್ಷಾಗಳ ಮೇಲೆಯೇ ಬಿದ್ದ ಘಟನೆ ಮೇ.25 ರಂದು ನಡೆದಿದೆ.
ಕಾಂಪೌಂಡ್ ಬದಿಯಲ್ಲೇ ಆಟೋ ರಿಕ್ಷಾ ನಿಲ್ದಾಣವಿದ್ದು ಬಲ್ನಾಡಿನ 3 ಸರ್ವೀಸ್ ಆಟೋ ರಿಕ್ಷಾಗಳು ಜಖಂಗೊಂಡಿದೆ. ಆಟೋದಲ್ಲಿ ಯಾರೂ ಇಲ್ಲದ ವೇಳೆ ಕುಸಿದಿದ್ದು ಭಾರೀ ದುರಂತವೊಂದು ತಪ್ಪಿದೆ.

ಸದ್ಯ ಕಾಂಪೌಂಡ್ ನ ಕಲ್ಲು ಹಾಗೂ ರಸ್ತೆ ಬದಿ ಬಿದ್ದಿರುವ ಮಣ್ಣನ್ನು ಪುತ್ತೂರು ನಗರಸಭೆ ತೆರವುಗೊಳಿಸಿದೆ.
ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯ ಸುಂದರ ಪೂಜಾರಿ ಬಡಾವು ಭೇಟಿ ನೀಡಿದ್ದಾರೆ.



