ಪುತ್ತೂರು: ಕಳೆದ ಕೆಲವು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಇದ್ದ ಗೋಡೆ ಕುಸಿದು ಬಿದ್ದಿದೆ.

ಹೂ ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಗೋಡೆ ಬಿದ್ದಿದ್ದು ಅವರು ಸಣ್ಣ ಪುಟ್ಟ ಗಾಯಗಳ ಮೂಲಕ ಅಪಾಯದಿಂದ ಪಾರಾಗಿದ್ದಾರೆ.
ಈ ಮೂಲಕ ಜೀವ ಹಾನಿಯೊಂದು ತಪ್ಪಿದಂತಾಗಿದೆ.
ಇತ್ತೀಚೆಗೆ ಈ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಆದರೆ ಗೋಡೆಯ ಒಂದು ಪಾರ್ಶ್ವವನ್ನು ಹಾಗೇ ಬಿಡಲಾಗಿತ್ತು. ಭಾರೀ ಮಳೆಯ ಹಿನ್ನಲೆ ಗೋಡೆ ಈಗ ಕುಸಿದು ಬಿದ್ದಿದೆ.



