Breaking
23 Mar 2026, Mon

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಇಂದು ಹಿಂದೂ ಕಾರ್ಯಕರ್ತರಿಂದ ‘ಬಜ್ಪೆ ಚಲೋ’!

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ನಗರದ ಬಜಪೆ ಜಂಕ್ಷನ್ನಲ್ಲಿರುವ ಶಾರದಾ ಮಂಟಪದ ಬಳಿ ನಡೆಯಲಿದೆ.

ಸಂಜೆ 3.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸಾಧ್ಯತೆ ಇದೆ.

ಯಾವುದೇ ಅನಾಹುತಗಳು ನಡೆಯದಂತೆ ಅಗತ್ಯ ಪೊಲೀಸರು ಸೂಕ್ತ ಬಂದೋಬಸ್ತ್ ನ್ನು ಕೈಗೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂಘಟಕ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದಾರೆ.

ಇತ್ತ ಮಂಗಳೂರು, ಸುರತ್ಕಲ್, ಕಾವೂರು ಭಾಗದಿಂದ ಬರುವವರಿಗೆ ವಾಹನ ನಿಲುಗಡೆಗೆ ಬಜಪೆ ನಾರಾಯಣ ಗುರು ಮಂದಿರದ ಬಳಿ ವ್ಯವಸ್ಥೆ ಮಾಡಲಾಗಿದೆ.

ಗುರುಪುರ, ವಾಮಂಜೂರು, ಮಳಲಿ ಕಡೆಯಿಂದ ಬರುವವರು ವಾಹನಗಳನ್ನು ಸಂಜೀವ ಶೆಟ್ಟಿ ಸಭಾಭವನ ಮತ್ತು 3 ಮೈದಾನಗಳಲ್ಲಿ ನಿಲ್ಲಿಸಬಹುದಾಗಿದೆ.

ಮೂಲ್ಕಿ, ಮೂಡುಬಿದಿರೆ ಕಡೆಯಿಂದ ಬರುವ ವಾಹನಗಳಿಗೆ ಯಾದವ ಕೋಟ್ಯಾನ್ ಕನ್ನಿಕಾ ನಿಲಯ ಮೈದಾನದ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *