Breaking
23 Mar 2026, Mon

ಹೃದಯಾಘಾತ: ಪತ್ನಿಯ ಸೀಮಂತ ದಿನ ಕುಸಿದು ಬಿದ್ದ ಪತಿ: ಚಿಕಿತ್ಸೆ ಫಲಿಸದೆ ಸಾವು!

ವಿಟ್ಲ: ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಪಿಕಪ್ ಚಾಲಕ ಸತೀಶ್(33) ಮೇ. 22ರಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕನ್ಯಾನದ ಮಿತ್ತನಡ್ಕ ಎಂಬಲ್ಲಿಯ ನಿವಾಸಿಯಾಗಿರುವ ಇವರು ಪತ್ನಿಯ ಸೀಮಂತದ ದಿನವೇ ಹಠಾತ್ತನೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.‌

ಮೃತರು ತಂದೆ-ತಾಯಿ, ಗರ್ಭಿಣಿ ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *