Breaking
23 Mar 2026, Mon

ಮಂಗಳೂರು: ವಳಚ್ಚಿಲ್‌ನಲ್ಲಿ ಚೂರಿ ಇರಿತ: ವ್ಯಕ್ತಿ ಸಾವು

ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿಯೊರ್ವರನ್ನು ಕೊಲೆ ಮಾಡಿದ ಘಟನೆ ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮೇ 22ರಂದು ನಡೆದಿದೆ.

ಸುಲೈಮಾನ್ ಎಂಬಾತ ಕೊಲೆಯಾದ ವ್ಯಕ್ತಿ.

ವಳಚ್ಚಿಲ್ ನಿವಾಸಿ ಮುಸ್ತಾಫ ಎಂಬಾತ ಚೂರಿ ಇರಿತ ಮಾಡಿದ್ದು, ಕುಟುಂಬ ಸಮಸ್ಯೆ ಬಗ್ಗೆ ಮಾತುಕತೆ ನಡೆಸುತ್ತಿದ್ದ ವೇಳೆ ಮುಸ್ತಾಫ ಚೂರಿಯಿಂದ ಇರಿದು ಸುಲೈಮಾನ್ ನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುಲೈಮಾನ್ ಅವರೊಂದಿಗೆ ಇಬ್ಬರು ಮಕ್ಕಳಿಗೂ ಚೂರಿಯಿಂದ ಇರಿದಿದ್ದಾನೆ.

ಸಿಯಾಬ್ ಎಂಬಾತನ ಎದೆಗೆ ಚೂರಿಯಿಂದ ಇರಿದಿದ್ದು, ಅವರು ನಗರದ ಪಡೀಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಯಾಬ್ ಎಂಬಾತನ ಕೈಗೆ ಇರಿದು ಗಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *