Breaking
23 Mar 2026, Mon

ಟೆಂಪೋ ಬದಿಗೆ ಸರಿಸಲು ಹೇಳಿದ್ದಕ್ಕೆ ಬೇಕರಿ ಮಾಲಕನಿಗೆ ಹಲ್ಲೆ ಯತ್ನ: ಪ್ರಕರಣ ದಾಖಲು

ಉಳ್ಳಾಲ: ಬೇಕರಿ ಮುಂಭಾಗ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಹೇಳಿದ್ದಕ್ಕೆ ಕೋಪಗೊಂಡ ಚಾಲಕ ಬೇಕರಿ ಮಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮೇ 22ರಂದು ನಡೆದಿದೆ.

ಮಾರುತಿ ಸ್ವೀಟ್ಸ್‌ ಮಾಲಕರಾದ ಅಶ್ವಿನ್‌ ಕುಮಾರ್‌ ತಮ್ಮ ಬೇಕರಿ ಮುಂದೆ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸುವಂತೆ ಚಾಲಕ ಬಶೀರ್‌ನಲ್ಲಿ ಹೇಳಿದ್ದಾರೆ. ಇದಕ್ಕೆ ಚಾಲಕ ಬಶೀರ್‌ ಕೋಪಗೊಂಡು ತನ್ನ ಸಹಚರ ರಿಕ್ಷಾ ಚಾಲಕನಾದ ಇಶಾನ್‌ ನೊಂದಿಗೆ ಬೇಕರಿಗೆ ಬಂದು ಮಾಲಕ ಅಶ್ವಿನ್‌ ಅವರಿಗೆ ಹಲ್ಲೆ ಮಾಡಲು ಮುಂದಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ವೇಳೆ ಬೇಕರಿಯಲ್ಲಿದ್ದ ಅಶ್ವಿನ್‌ ಅವರ ತಾಯಿ ಮತ್ತು ಸಿಬ್ಬಂದಿ ಯುವತಿ ರಿಕ್ಷಾ ಚಾಲಕರನ್ನು ತಡೆದಿದ್ದು, ತಳ್ಳಿದ್ದಾರೆ. ಬೇಕರಿ ಮಾಲಕ ಅಶ್ವಿನ್‌ ಅವರು ತನ್ನ ಮತ್ತು ತಾಯಿ ಮೇಲೆ ಹಲ್ಲೆಗೆ ಯತ್ನ ಮಾಡಿ ಜೀವ ಬೆದರಿಕೆ ನೀಡಿರುವ ರಿಕ್ಷಾ ಚಾಲಕರಾದ ಬಶೀರ್‌ ಮತ್ತು ಇಷಾನ್‌ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *