Breaking
23 Mar 2026, Mon

ನಾಯಿ ವಿಚಾರಕ್ಕೆ ನೆರಹೊರೆಯ ಮನೆಯವರಿಗೆ ಜಗಳ: ಹಲ್ಲೆ, ಕೊಲೆ ಬೆದರಿಕೆ!

ಮಡಂತ್ಯಾರು: ನಾಯಿ ವಿಚಾರಕ್ಕೆ ನೆರಹೊರೆಯ ಮನೆಯವರಿಗೆ ಜಗಳ‌ ನಡೆದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಾಲು ಗ್ರಾಮದಲ್ಲಿ ನಡೆದಿದೆ.

ಬೆಳಾಲು ಗ್ರಾಮ ಪಂಚಾಯತ್‌ ನೀರು ನಿರ್ವಾಹಕ ಶಶಿಧರ ಎಂಬವರ ಮನೆಯ ನಾಯಿ ಪಕ್ಕದ ಮನೆಯ ಸುಮಿತ್ರಾ ಅಣ್ಣಿ ಗೌಡ ಅವರ ಮನೆಯ ನಾಯಿಯನ್ನು ಕಚ್ಚಿ ಕೊಂದು ಹಾಕಿದೆ ಎಂದು ತಿಳಿದು ಅಣ್ಣಿ ಗೌಡ ಹಾಗೂ ಅವರ ಹೆಂಡತಿ ಮತ್ತು ಮಕ್ಕಳು ಶಶಿಧರ್‌ ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಶಿಧರ ಅವರ ತಾಯಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಗಳದ ಸಂದರ್ಭ ಅಣ್ಣಿ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂಧಿಸಿ ಶಶಿಧರ ಅವರ ತಾಯಿಯ ರವಿಕೆಯನ್ನು ಹರಿದು ಮಾನಹಾನಿ ಮಾಡುವ ರೀತಿಯಲ್ಲಿ ವರ್ತಿಸಿ, ನಿಮ್ಮ ಮಗ ಶಶಿಧರನನ್ನು ಕೊಲ್ಲದೇ ಬಿಡುವುದಿಲ್ಲ ಎಂಬಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಗಾಯಗೊಂಡಿರುವ ಶಶಿಧರ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *