Breaking
6 Aug 2026, Thu

ಆಕಾಂಕ್ಷ ನಿಗೂಢ ಸಾವು ಪ್ರಕರಣ – ಸಬ್ ಇನ್ಸ್ ಪೆಕ್ಟರ್ ಜಸ್ವಿರ್ ಸಿಂಗ್ ಸಸ್ಪೆಂಡ್

ಧರ್ಮಸ್ಥಳ: ಗ್ರಾಮದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಮೇ. 18ರಂದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಜಾಬ್ ನ ಪಗ್ವಾಡ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಸ್ವಿರ್ ಸಿಂಗ್ ಎಂಬಾತನನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.

ಪೊಲೀಸರು ಆಕಾಂಕ್ಷ ಕುಟುಂಬದ ದೂರನ್ನು ಪಗ್ವಾಡ ಠಾಣೆಯಲ್ಲಿ ಸ್ವೀಕರಿಸದೇ, ಬೇರೆ ದೂರು ದಾಖಲಿಸಿಕೊಂಡು ಪ್ರಕರಣವನ್ನು ತಿರುಚಿವುದಕ್ಕೆ ಯತ್ನವನ್ನು ಮಾಡಿದ್ದರು ಎಂದು ಕುಟುಂಬಸ್ಥರು ಆರೋಪವನ್ನು ಮಾಡಿದ್ದರು.

ಈ ಹಿನ್ನಲೆ ಆಕಾಂಕ್ಷ ಕುಟುಂಬ ಮೇಲಾಧಿಕಾರಿಗಳಿಗೆ ದೂರು ನೀಡಿತ್ತು. ಇದೀಗ ಪ್ರಕರಣದ ಮುಂದುವರಿದ ಭಾಗವಾಗಿ ತನಿಖೆ ನಡೆಸಲು ಎಸ್. ಪಿ ಸೇರಿದಂತೆ ಐವರು ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಲಾಗಿದೆ .

Leave a Reply

Your email address will not be published. Required fields are marked *