ಬಂಟ್ವಾಳ: ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಸಮೀಪದ ಪಲ್ಲಿಕಂಡದಲ್ಲಿ ಮೇ 19 ರ ತಡರಾತ್ರಿ ನಡೆದಿದೆ.
ಪಲ್ಲಿಕಂಡ ನಿವಾಸಿಯಾದ ಸಿಸಿಲಿಯಾ ಪಿಂಟೋ ರವರ ಮನೆ ಕುಸಿದು ಬಿದ್ದಿದ್ದು ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.


ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಬಂಟ್ವಾಳ ಪುರಸಭೆ ಸದಸ್ಯ ಬಿ. ವಾಸು ಪೂಜಾರಿ ಲೋರೆಟ್ಟೋ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

